March 18, 2026

ಈ ದ್ವಿಚಕ್ರ ವಾಹನದ ಮೇಲಿದೆ 225 ಕೇಸ್: ದಂಡದ ಮೊತ್ತ ಎಷ್ಟು ಲಕ್ಷ ರೂ. ಗೊತ್ತೇ?

0
image_editor_output_image1371426544-1702371786359.jpg

ಬೆಂಗಳೂರು: ವಾಹನವನ್ನು ಓಡಿಸುವಾಗ ಎಲ್ಲರೂ ಎಂಜಾಯ್ ಮಾಡಿಕೊಂಡು ಓಡಿಸುತ್ತಾರೆ. ಅದೇ ದಂಡ ಕಟ್ಟುವಾಗ ಮಾತ್ರ ತಲೆ ಬಿಸಿಯಾಗುತ್ತದೆ. ಅದೇ ರೀತಿ ಇಲ್ಲೊಬ್ಬನ ವಾಹನದ ಮೇಲೆ ಬರೋಬ್ಬರಿ 225 ಕೇಸು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದಂಡ ಕಟ್ಟದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿ ಇದೀಗ ಪೊಲೀಸರ ಕೈ ಸೇರಿದ್ದಾನೆ. ಜಯನಗರದ ಏಳುಮಲೈ ಅವರ ಟೂ ವೀಲರ್‌ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಮೂಲಕ ಕೇವಲ 25 ಸಾವಿರ ರೂ.ಯ ದ್ವಿಚಕ್ರ ವಾಹನಕ್ಕೆ ಬರೋಬ್ಬರಿ 1,34,000 ರೂ. ದಂಡ ಬಿದ್ದಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ ಮೊತ್ತವನ್ನು ಹೇಳಿದ್ದಾರೆ. ಸದ್ಯ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಸ್ಥಳದಲ್ಲಿ ಕಟ್ಟಿಸಿಕೊಂಡು ಬಾಕಿ ದಂಡವನ್ನು ಪಾವತಿಸಲು ಏಳುಮಲೈಗೆ ಜಯನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!