May 9, 2026

ಜೆಸಿಬಿಯಲ್ಲಿ ಮೆರವಣಿಗೆ, ಮಂಟಪದಲ್ಲೇ ಕೋಳಿ ಅಂಕ: ಉಡುಪಿಯಲ್ಲಿ ಹೀಗೊಂದು ವಿಭಿನ್ನ ಮದುವೆ

0
image_editor_output_image-676971666-1702371206346.jpg

ಉಡುಪಿ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಭಿನ್ನ ಮದುವೆಯನ್ನು ಕಾಣಬಹುದು. ಸಾಮಾನ್ಯ ಶಾಸ್ತ್ರಗಳನ್ನು ಹೊರತು ಪಡಿಸಿ ನಾಲ್ಕು ಜನ ತಿರುಗಿ ನೋಡುವಂತೆ ಮದುವೆ ನಡೆಯಬೇಕು ಎನ್ನುವುದು ಕೆಲವರ ಆಸೆಯಾಗಿರುತ್ತದೆ. ಹೀಗಾಗಿ ವಿಭಿನ್ನವಾಗಿ ಏನಾದರೂ ಅವರು ಪ್ರಯತ್ನ ಮಾಡುತ್ತಾರೆ.

ಹಲವರು ಅವರವರ ಪರಿಸ್ಥಿರಿ ಅನುಗುಣವಾಗಿ ವಿಭಿನ್ನವಾಗಿ ವೈಭವಯುತವಾಗಿ ಮದುವೆ ಮಾಡಿಕೊಂಡರೆ ಉಡುಪಿಯ ಬ್ರಹ್ಮಾವರ ಜೋಡಿಯೊಂದು ಅತ್ಯಂತ ವಿಭಿನ್ನವಾಗಿ ಮದುವೆಯಾಗಿ ಸುದ್ದಿಯಾಗಿದ್ದಾರೆ.

ಜೆಸಿಬಿಯಲ್ಲಿ ಮೆರವಣಿಗೆ ಮೂಲಕ ಮಂಟಪಕ್ಕೆ ಬಂದು ಮಂಟಪದಲ್ಲೇ ಕೋಳಿ ಅಂಕ ಆಡುವ ಮೂಲಕ ವಿಭಿನ್ನ ಮದುವೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭದಲ್ಲಿ ಎಲ್ಲಾ ಮದುವೆಗಳಿಂದ ವಿಭಿನ್ನವಾಗಿ ನಡೆದಿದೆ. ಇದೆಲ್ಲಾ ಸ್ನೇಹಿತರ ಕಿತಾಪತಿಯಿಂದಾದ ಸಂಭ್ರಮ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!