February 1, 2026

ಜಗದೀಶ್ ಠಾಕೂರ್ ನೂತನ ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ

0
WhatsApp_Image_2021-12-03_at_1_3_1200x768.jpeg

ಗುಜರಾತ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮಿತ್ ಚಾವ್ಡಾ ಬದಲಿಗೆ ಜಗದೀಶ್ ಠಾಕೋರ್ ಅವರನ್ನು ಗುಜರಾತ್ ಕಾಂಗ್ರೆಸ್‌ನ ಹೊಸ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ನೇಮಕವಾಗಿದ್ದು, ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

“ಕಾಂಗ್ರೆಸ್ ಅಧ್ಯಕ್ಷರು ತಕ್ಷಣವೇ ಜಾರಿಗೆ ಬರುವಂತೆ ಶ್ರೀ ಜಗದೀಶ್ ಠಾಕೋರ್ ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ” ಎಂದು ಪಕ್ಷದ ಅಧಿಕೃತ ಹೇಳಿಕೆ ಶುಕ್ರವಾರ ತಿಳಿಸಿದೆ.

ನಿರ್ಗಮಿತ ಪಿಸಿಸಿ ಅಧ್ಯಕ್ಷ ಶ್ರೀ ಅಮಿತ್ ಚಾವ್ಡಾ ಅವರ ಕೊಡುಗೆಯನ್ನು ಪಕ್ಷವು ಪ್ರಶಂಸಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!