May 9, 2026

ಮೈಸೂರು ವಿಭಾಗ ಮಟ್ಟದ ತ್ರೋಬಾಲ್ ಪಂದ್ಯಾಟ : ಪುತ್ತೂರಿನ ಬೆಥನಿ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0
image_editor_output_image-460800845-1702054534778

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಹಾಸನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್  ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಆಯಿಷತ್ ಹಿಬಾ, ನಿರೀಕ್ಷಾ H ಶೆಟ್ಟಿ, ವೈಗಾ ಎಂ, ಇವರುಗಳು
ರಾಜ್ಯಮಟ್ಟದಲ್ಲಿ ಆಡಲಿದ್ದಾರೆ.

ಹನ ನಫೀಸ, ಫಾತಿಮಾತ್ ಅಲ್ ಶಿಫಾ, ನದ ಆಯಿಷಾ, ಶಾನ್ವಿ  ಪ್ರೀಷ್ಮ ಮೊಂತೆರೊ, ಪೂರ್ವಿಕ, ಸಿಂಚನ, ಅಲಂಕ್ರಿತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವಿಗೆ ಪಾತ್ರರಾದರು

ಶಾಲಾ ದೈಹಿಕ ಶಿಕ್ಷಕರಾದ ಶ್ರೀ ನಿರಂಜನ್ ಹಾಗೂ ಶ್ರೀ ಅಕ್ಷಯ್ ರವರು ಮಕ್ಕಳಿಗೆ ತರಬೇತಿಯನ್ನು ನೀಡಿರುತ್ತಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸೆಲಿನ್ ಪೇತ್ರಾ ರವರು ಮಕ್ಕಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!