February 4, 2026

ಮಂಗಳೂರು: ಇಂದಿನಿಂದ 8 ದಿನಗಳ ಕಾಲ ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

0
image_editor_output_image788036660-1701841890298.jpg

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಬೆಂದೂರ್‌ವೆಲ್ ಪಣಂಬೂರು 1000 ಎಂ.ಎಂ ವ್ಯಾಸದ ಮುಖ್ಯ ಕೊಳವೆಯನ್ನು ನಾಗುರಿ ಮಾರುಕಟ್ಟೆ ಬಳಿ ಬಲಪಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 6ರಿಂದ 8ರವರೆಗೆ ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಡಿಸೆಂಬರ್ 6ರಂದು ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 8ರ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಬೆಂದೂರ್‌ವೆಲ್ ಲೋ ಲೆವೆಲ್ ಪ್ರದೇಶಗಳಾದ ಪಿವಿಎಸ್, ಲೇಡಿಹಿಲ್, ಬಂದರ್, ಮೇರಿಹಿಲ್, ಪಚ್ಚನಾಡಿ, ಆಶೋಕನಗರ, ದೇರೆಬೈಲ್, ಕೊಡಿಯಾಲ್ ಬೈಲ್, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶ: ಕಾನ, ಬಾಳೆ, ಕುಳಾಯಿ, ಮುಕ್ಯ ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ನೀರು ನಿಲುಗಡೆಯಾಗಲಿದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!