March 21, 2026

ಜೈಲಿನ ಮೇಲೆ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳ ದಾಳಿ:
ಮೊಬೈಲ್, ಗಾಂಜಾ, ಇತರ ವಸ್ತುಗಳು ಪತ್ತೆ

0
image_editor_output_image-595046947-1638247259478.jpg

ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಜೈಲಿನ ಮೇಲೆ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜೈಲಿನಲ್ಲೇ ಕುಳಿತು ಪಾತಕಿಗಳು ಅಕ್ರಮ ವ್ಯವಹಾರ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಈ ದಾಳಿಯನ್ನು ಕೈಗೊಂಡಿದ್ದಾರೆ.

ಅಕ್ರಮ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ, ಮೊಬೈಲ್, ಗಾಂಜಾ ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಅಕ್ರಮ ಚಟುವಟಿಕೆಗಳ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಸಿಸಿಬಿ ತಂಡ ದಾಳಿ ನಡೆಸಿದೆ ಎನ್ನಲಾಗುತ್ತಿದ್ದು, ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

ಇಬ್ಬರು ಡಿಸಿಪಿ ನೇತೃತ್ವದಲ್ಲಿ ಸಿಸಿಬಿ ತಂಡ ಈ ದಾಳಿ ನಡೆಸಿದ್ದು, ಕಾರ್ಯಾಚರಣೆ ಇನ್ನು ಮುಂದುವರಿದಿದೆ. ಪರಪ್ಪನ ಅಗ್ರಹಾರ ಜೈಲನ್ನು ತಡಕಾಡುತ್ತಿರುವ ಅಧಿಕಾರಿಗಳು, ಜೈಲಿನಲ್ಲಿರುವ ಸಿಬ್ಬಂದಿ ಹಾಗೂ ಕೈದಿಗಳು ಶಾಕ್ ಗೆ ಒಳಗಾಗಿದ್ದಾರೆ. ಸಿಸಿಬಿ ಪೂರ್ಣ ತಂಡದಿಂದ ನಡೆದ ಈ ದಾಳಿ ಸದ್ಯ ಮುಂದುವರಿಸಿದ್ದು, ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!