March 21, 2026

ದೆಹಲಿಗೆ ತೆರಳುವ ಸ್ಪೈಸ್ ಜೆಟ್ ವಿಮಾನದಲ್ಲಿ ಅಶಿಸ್ತಿನ ವರ್ತನೆ:
ಪ್ರಯಾಣಿಕರನ್ನು ಕೆಳಗಿಳಿಸಿದ ಅಧಿಕಾರಿಗಳು

0
spiceje-1617183701-1634315265-1638083660.jpg

ದೆಹಲಿ: ಸ್ಪೈಸ್‌ಜೆಟ್ ಫ್ಲೈಟ್ ಎಸ್‌ಜಿ 8169 ಗುವಾಹಟಿ-ದೆಹಲಿ ಪ್ರಯಾಣಿಸುವ ಸಂದರ್ಭದಲ್ಲಿ ಭಾನುವಾರದಂದು ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿದ ಘಟನೆ ನಡೆದಿದೆ.

ಪ್ರಯಾಣಿಕ ಪದೇ ಪದೇ ತನ್ನ ಸೀಟಿನಿಂದ ಇಳಿದು ಗಲಾಟೆಯನ್ನು ಸೃಷ್ಟಿಸಿದ್ದು, ಸ್ಪೈಸ್‌ಜೆಟ್ ವಕ್ತಾರರ ಪ್ರಕಾರ, “ಅವರನ್ನು ಸಮಾಧಾನಪಡಿಸಲು ಪುನರಾವರ್ತಿತ ಪ್ರಯತ್ನಗಳು ವಿಫಲವಾದ ನಂತರ ಮತ್ತು ಸಹ-ಪ್ರಯಾಣಿಕರು ವಿಮಾನದಲ್ಲಿ ಆತನ ಜೊತೆ ಪ್ರಯಾಣಿಸಲು ತಾವು ಸಿದ್ಧರಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದರು” ಎಂದು ಹೇಳಿದರು.

“ವಿಮಾನವನ್ನು ಮರಳಿ ವಿಮಾನ ನಿಲ್ದಾಣಕ್ಕೆ ತರಲಾಯಿತು, ಅಲ್ಲಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸ್ಪೈಸ್‌ಜೆಟ್ ಸಿಬ್ಬಂದಿಯೊಂದಿಗೆ ಪ್ರಯಾಣಿಕನನ್ನು ಕೆಳಗಿಳಿಸಿ ಸಿಐಎಸ್‌ಎಫ್‌ಗೆ ಹಸ್ತಾಂತರಿಸಿದರು” ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!