ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ:
ಆರೋಪಿ ಸೇನಾ ಸಿಬ್ಬಂದಿ ಬಂಧನ
ಮಥುರಾ: 21 ವರ್ಷದ ಮಹಿಳೆಗೆ ಡ್ರಗ್ಸ್ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಸೇನಾ ಸಿಬ್ಬಂದಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಸಂತ್ರಸ್ತೆ ಮತ್ತು ಆರೋಪಿ ತೇಜ್‌ವೀರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ’ ಎಂದು ಅವರು ಹೇಳಿದರು.
‘ಅವರಿಬ್ಬರು ನನಗೆ ಡ್ರಗ್ಸ್ ನೀಡಿದರು. ಬಳಿಕ ತೇಜ್‌ವೀರ್ ತನ್ನ ಮೇಲೆ ಅತ್ಯಾಚಾರವೆಸಗಿದರೆ, ದಿಗಂಬರ್ ಲೈಂಗಿಕ ಕಿರುಕುಳ ನೀಡಿದ. ನಂತರ ಅವರು ನನ್ನನ್ನು ಕೊಸಿ ಕಲಾನ್ ಪ್ರದೇಶದಲ್ಲಿ ಬಿಟ್ಟು ಹೋದರು’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
‘ದಿಗಂಬರ್‌ನನ್ನು ಕೊಟಾಬನ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಬ್ಬರು ಆರೋಪಿಗಳು ಹರಿಯಾಣದ ಪಲ್ವಾಲ್‌ನ ಮನ್ಪುರ ಗ್ರಾಮದ ನಿವಾಸಿಗಳು’ ಎಂದು ಅಧಿಕಾರಿಗಳು ಅವರು ಮಾಹಿತಿ ನೀಡಿದರು




