February 4, 2026

ಸುಳ್ಯ: ಬೈಕ್ ಅಪಘಾತ: ಇಬ್ಬರಿಗೆ ಗಂಭೀರ ಗಾಯ

0
IMG-20230528-WA0038.jpg

ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡೀಲ್ ಎಂಬಲ್ಲಿ ಬೈಕ್ ಅಪಘಾತ ಸಂಭವಿಸಿ ಇಬ್ಬರಿಗೆ ಗಂಭೀರವಾಗಿ ಗಾಯ ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಡೆಕೋಲು ಗ್ರಾಮದ ಭವಾನಿಶಂಕರ್ ಹಾಗೂ ಅವರ ಪತ್ನಿ ಲೀಲಾವತಿ ಸುಳ್ಯದಿಂದ ಮಂಡೆಕೋಲು ಮನೆಗೆ ತೆರಳುವಾಗ ಪಾದಚಾರಿಗೆ ಗುದ್ದಿ ರಸ್ತೆಗೆ ಲೀಲಾವತಿ ಬಿದ್ದಿದ್ದಾರೆ ಆ ಸಂದರ್ಭದಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿದ್ದು ಅವರ ಜೊತೆಯಲ್ಲಿ ಇದ್ದ ಇಬ್ಬರಿಗೆ ಗಾಯಗಳಾಗಿದ್ದು ಲೀಲಾವತಿ ಹಾಗೂ ಭವಾನಿಶಂಕರರನ್ನು ಅವರನ್ನು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!