September 20, 2024

ಬಾವಿಗೆ ಬಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಿದ 13 ವರ್ಷದ ಬಾಲಕಿ

0

ಚಾತ್ರಾ:40 ಅಡಿ ಅಳದ ಬಾವಿಗೆ ಬಿದ್ದ ಮಗುವನ್ನು 13 ವರ್ಷದ ಬಾಲಕಿ ರಕ್ಷಿಸಿದ ಘಟನೆ ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿ ನಡೆದಿದೆ.

ಮೂರು ವರ್ಷದ ಶಿವಂ ಕುಮಾರ್ ಬಾವಿಯ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದು, ಇದನ್ನು ನೋಡಿದ ಕಾಜಲ್ ಕುಮಾರಿ ಭೂಯಾನ್ ಒಂದು ಸೆಕೆಂಡ್ ವ್ಯರ್ಥ ಮಾಡದೆ ಬಾವಿಗೆ ಹಾರಿದ್ದಾಳೆ. ಒಂದು ಕೈಯಲ್ಲಿ ಮಗುವನ್ನು  ಹಿಡಿದು ಇನ್ನೊಂದು ಕೈಯಲ್ಲು ಮೋಟಾರ್ ಪಂಪಿನ ಪೈಪ್ ಹಿಡಿದು ಸಹಾಯಕ್ಕಾಗಿ ಕೂಗಿದ್ದಾಳೆ. ಸುಮಾರು ಒಂದು ಗಂಟೆಯ ನಂತರ ಕಾಜಲ್ ಮತ್ತು ಶಿವಂ ಇಬ್ಬರನ್ನೂ ಹಗ್ಗದ ಸಹಾಯದಿಂದ ಗ್ರಾಮಸ್ಥರು ರಕ್ಷಿಸಿದ್ದಾರೆ.

ಚತ್ರಾ ಡೆಪ್ಯುಟಿ ಕಮಿಷನರ್, ಅಬು ಇಮ್ರಾನ್ ಅವರು ಘಟನೆಯ ವಿವರಗಳನ್ನು ಕೇಳಿದ್ದು, ಅಸಾಧಾರಣ ಧೈರ್ಯವನ್ನು ತೋರಿದ ಬಾಲಕಿಯ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಮಂಗಳವಾರ ಗ್ರಾಮದ ಪಂಚಾಯತ್ ಮುಖಂಡರು, ಮುಖಿಯಾ ಮತ್ತು ಇತರರ ಸಹಾಯದಿಂದ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಹಜಾರಿಬಾಗ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!