ಕಟಪಾಡಿ: ಟೆಂಪೋ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಕಟಪಾಡಿ: ಬೈಕ್ ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕಟಪಾಡಿ ಸುಭಾಷ್ ನಗರ ರೈಲ್ವೇ ಸೇತುವೆ ಬಳಿ ನಡೆದಿದೆ.
ಕಟಪಾಡಿಯಿಂದ ಶಿರ್ವ ಕಡೆ ಹೋಗುತ್ತಿದ್ದ ಟೆಂಪೋ ಶಂಕರಪುರದಿಂದ ಕಟಪಾಡಿ ಕಡೆ ಹೋಗುತ್ತಿದ್ದ ಬೈಕ್ ಸವಾರರ ಮಧ್ಯ ಭೀಕರ ಅಪಘಾತ ನಡೆದಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಶ್ರೀನಿವಾಸ್ ರಾವ್ (50) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಈ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




