February 3, 2026

ಮಂಗಳೂರು: ಉದ್ಯಮಿ, ಜೆಡಿಎಸ್ ನಾಯಕ ಸುಶೀಲ್ ನೊರೊನ್ಹಾ ನಿಧನ

0
IMG-20230113-WA0053.jpg

ಮಂಗಳೂರು: ಖ್ಯಾತ ಉದ್ಯಮಿ ಹಾಗೂ ಜೆಡಿಎಸ್ ನಾಯಕ ಸುಶೀಲ್ ನೊರೊನ್ಹಾ (60) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಲೆಕ್ಟ್ರಿಕಲ್ ಸರಕುಗಳ ಪೂರೈಕೆಯ ಸುಶೀಲ್ ಇಲೆಕ್ಟ್ರಿಕಲ್ಸ್ ಮಾಲಕರಾಗಿದ್ದ ಸುಶೀಲ್ ನೊರೊನ್ಹಾ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾಗಿದ್ದು, 2012ರಲ್ಲಿ ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರಾಗಿದ್ದರು.

ಇನ್ನು ಸುಶೀಲ್ ನೊರೊನ್ಹಾ ಅವರು ತಾಯಿ ಸ್ಟೆಲ್ಲಾ ನೊರೊನ್ಹಾ, ಪತ್ನಿ ಎಡ್ನಾ ನೊರೊನ್ಹಾ, ಮಗ ಏಂಜೆಲೊ ನೊರೊನ್ಹಾ ಮತ್ತು ಸಹೋದರ ವಕೀಲ ಎಂಪಿ ನೊರೊನ್ಹಾ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!