February 3, 2026

ಸಾಲಗಾರರ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಕುಟುಂಬ

0
image_editor_output_image-1926732665-1673605107300.jpg

ಶಿವಮೊಗ್ಗ: ಸಾಲಗಾರರ ಕಾಟ ತಾಳಲಾರದೆ ತಮ್ಮ ಸಾಕು ಮಗನೊಂದಿಗೆ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವಿಷ ಸೇವಿಸಿದ ವೃದ್ದರಾದ ಪ್ರತಾಪ (70) ಮತ್ತು ದಾನಮ್ಮ (63) ದಂಪತಿಗಳು ಮನೆಯಲ್ಲೇ ಸಾವನ್ನಪ್ಪಿದರೆ, ಅಸ್ವಸ್ಥರಾಗಿದ್ದ ಮಗ ಮಂಜುನಾಥ್ (25) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶಿವಮೊಗ್ಗದ ಮಿಳಘಟ್ಪದ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬವು ಮನೆ ನಿರ್ವಹಣೆಗೆ ಸಾಲ ಮಾಡಿಕೊಂಡಿತ್ತು.

ಸಾಕಿದ ಮಗನೂ ಪಾರ್ಶ್ವವಾಯು ಪೀಡಿತರಾದ ಹಿನ್ನೆಲೆಯಲ್ಲಿ ನಆತ ಕೂಡಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದ. ಪತಿಗೆ ವಯಸ್ಸು ಆಗಿದ್ದರಿಂದ ಕೆಲಸವಿರಲಿಲ್ಲ. ಪತ್ನಿಯೇ ಕೊಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಬೇಕಿತ್ತು.

Leave a Reply

Your email address will not be published. Required fields are marked *

error: Content is protected !!