March 19, 2026

ಕಾಸರಗೋಡು: ನಿಯಂತ್ರಣ ತಪ್ಪಿ ಕಂಪ್ರೆಸರ್ ಟ್ರಾಕ್ಟರ್ ಪಲ್ಟಿ: ಚಾಲಕ ಮೃತ್ಯು

0
IMG-20230112-WA0032.jpg

ಕಾಸರಗೋಡು: ಕಂಪ್ರೆಸರ್ ಟ್ರಾಕ್ಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಪೈವಳಿಕೆ – ಚೇವಾರ್ ರಸ್ತೆಯ ಕಟ್ಟದಮನೆ ಸೇತುವೆ ಬಳಿ ನಡೆದಿದೆ.

ಚಾಲಕ ನೇಪಾಳ ಮೂಲದ ರುಂಕಾವ್ ನ ಸುರೇಶ್ ಪೊನ್ (28) ಮೃತಪಟ್ಟಿದ್ದು, ಜೊತೆಗಿದ್ದ ನೇಪಾಳದ ವಾಸ್ಪತಿ ತಾಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಾಗುಚಿದ ಪರಿಣಾಮ ಅದರಡಿ ಸಿಲುಕಿದ್ದ ಸುರೇಶ್ ರನ್ನು ನಾಗರಿಕರು ಹೊರ ತೆಗೆದು ಬಂದ್ಯೋಡಿನ ಆಸ್ಪತ್ರೆಗೆ ತಲಪಿಸಿದ್ದು, ಸ್ಥಿತಿ ಚಿಂತಾಜನಕ ವಾದುದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

ಇನ್ನು ಎರಡು ದಿನಗಳ ಹಿಂದೆಯಷ್ಟೇ ಸುರೇಶ್ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!