November 13, 2024

ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆಗೆ ಅವಕಾಶ ನೀಡಿದ ಬಾಂಬೆ‌ ಹೈಕೋರ್ಟ್

0

ಮಹಾರಾಷ್ಟ್ರ: ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆಗೆ ಮಹಾರಾಷ್ಟ್ರ ಸರ್ಕಾರ ಹೇರಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್‌ ರದ್ದುಗೊಳಿಸಿ, ಬೇಬಿ ಪೌಡರ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್.ಜಿ.ಡಿಗೆ ಅವರ ವಿಭಾಗೀಯ ಪೀಠವು ಪೌಡರ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಕಂಪನಿಗೆ ಅನುಮತಿ ನೀಡಿದೆ.

ಜಾನ್ಸನ್ಸ್‌ ಬೇಬಿ ಪೌಡರ್‌ನಲ್ಲಿ ಹಾನಿಕಾರಕ ಅಂಶಗಳಿದ್ದು, ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸಬೇಕು ಎಂದು 2022ರ ಸೆಪ್ಟೆಂಬರ್‌ 15ರಂದು ಸೂಚನೆ ನೀಡಿ ಕಂಪನಿಯ ಪರವಾನಗಿಯನ್ನು ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿತ್ತು.

Leave a Reply

Your email address will not be published. Required fields are marked *

error: Content is protected !!