March 26, 2026

ಉತ್ತರಪ್ರದೇಶ: ಗ್ಯಾಸ್ ಹೀಟರ್ ಹಾಕಿದ್ದರಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ನಿದ್ದೆಯಲ್ಲೇ ಮೃತ್ಯು

0
Man_Death_Pixabay_13122021_1200.jpg

ಉತ್ತರಪ್ರದೇಶ: ರಾತ್ರಿ ತಮ್ಮ ಕೊಠಡಿಯೊಳಗೆ ಗ್ಯಾಸ್ ಹೀಟರ್ ಹಾಕಿದ್ದರಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ನಿದ್ದೆಯಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಸ್ಥಳೀಯ ಮದರಸಾದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಆಸಿಫ್ (35), ಅವರ ಪತ್ನಿ ಶಗುಫ್ತಾ (32) ಮತ್ತು ಅವರ ಮಕ್ಕಳಾದ ಜೈದ್ (3) ಮತ್ತು ಮೈರಾ (2) ಶನಿವಾರ ರಾತ್ರಿ ತಮ್ಮ ಕೋಣೆಯಲ್ಲಿ ಗ್ಯಾಸ್ ಹೀಟರ್ ಹಾಕಿಕೊಂಡು ಮಲಗಿದ್ದು, ಗ್ಯಾಸ್ ಹೀಟರ್‌ನಿಂದ ಉಸಿರುಗಟ್ಟಿದ ಸಾವನ್ನಪ್ಪಿದ್ದಾರೆ.

ಭಾನುವಾರ ಬೆಳಗ್ಗೆ ಸೀತಾಪುರ ಝಜ್ಜರ್ ಪ್ರದೇಶದ ಕುಟುಂಬದ ಮನೆಯ ಬಾಗಿಲನ್ನು ಹಾಲಿನ ವ್ಯಾಪಾರಿಯೊಬ್ಬರು ತಟ್ಟಿದರೂ ಯಾರೂ ಉತ್ತರಿಸದ ನಂತರ ವಿಷಯ ಬೆಳಕಿಗೆ ಬಂದಿದೆ.

ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಕುಟುಂಬದ ಸದಸ್ಯರೆಲ್ಲರೂ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಅವರನ್ನು ಬಿಸ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!