August 13, 2026

ತೂಕ ಇಳಿಸಿಕೊಳ್ಳಲು ಮಾತ್ರೆ ತೆಗೆದುಕೊಳ್ಳುತ್ತಿದ್ದ ಯುವಕ ಸಾವು

0
Screenshot_2023-01-05-12-22-27-73_680d03679600f7af0b4c700c6b270fe7.jpg

ಚೆನ್ನೈ: ಯುವಕನೋರ್ವ ತೂಕ ಇಳಿಸಿಕೊಳ್ಳಲು ಮಾತ್ರೆ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದ ಪಿ. ಸೂರ್ಯ (21) ಮೃತ ಯುವಕ.

ಯುವಕ ಸೂರ್ಯ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯ್ಲಲಿ ತೂಕ ಕಡಿಮೆ ಮಾಡಿಕೊಳ್ಳುವಂತೆ ಕಳೆದ ಕೆಲ ತಿಂಗಳ ಹಿಂದೆ ವೈದ್ಯರು ಸಲಹೆ ಮಾಡಿದ್ದರು. ಆದರೆ ಸ್ನೇಹಿತರ ಸಲಹೆ ಮೇಲೆ ಸೂರ್ಯ ಡಿಸೆಂಬರ್ 22ರಿಂದ ತೂಕ ಕಡಿಮೆ ಮಾಡುವ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು.

ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಮಾತ್ರೆ ತೆಗೆದುಕೊಂಡಿದ್ದರಿಂದ ಅವರು ತೂಕ ಕಳೆದುಕೊಂಡಿದ್ದರಲ್ಲದೇ, ದುರ್ಬಲವಾಗತೊಡಗಿದ್ದರು.

ಜನವರಿ 1ರಂದು ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಕೂಡಲೇ ಮನೆಯವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಸಾವನ್ನಪ್ಪಿದ್ದಾರೆ.

ಇನ್ನು ಮೃತನ ತಂದೆ ಪಾಳ್ಯಂ ಅವರು ಪೊಲೀಸರಿಗೆ ದೂರು ನೀಡಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಮಾತ್ರೆಯಿಂದಲೇ ಆತ ಸಾವನ್ನಪ್ಪಿದ್ದಾನೆಯೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!