February 3, 2026

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವ ವೈದ್ಯೆ ದೇಹಕ್ಕೆ ರಾಸಾಯನಿಕ ಚುಚ್ಚಿಕೊಂಡು ಆತ್ಮಹತ್ಯೆ

0
image_editor_output_image-1618571567-1672896320573.jpg

ಮಧ್ಯಪ್ರದೇಶ: ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವ ವೈದ್ಯೆಯೊಬ್ಬರು ದೇಹಕ್ಕೆ ಶಂಕಾಸ್ಪದ ರಾಸಾಯನಿಕ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ವಾಲಿಯರ್‌ ಮೂಲದ ಸ್ನಾತಕೋತ್ತರ ಪದವಿ ಪಡೆದ ಆಕಾಂಕ್ಷಾ ಮಹೇಶ್ವರಿ ಮೃತ ವೈದ್ಯೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವತಿ ಬರೆದ ಡೆಟ್ನೋಟ್ ಪತ್ತೆಯಾಗಿದ್ದು, ‘ನಾನು ಅಷ್ಟೊಂದು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Leave a Reply

Your email address will not be published. Required fields are marked *

error: Content is protected !!