ರಸ್ತೆ ಗುಂಡಿಯಿಂದ ಟ್ರಕ್ ಗೆ ಢಿಕ್ಕಿ ಹೊಡೆದ ದ್ವಿಚಕ್ರ ವಾಹನ: ಮಹಿಳೆ ಸಾವು
ಚೆನ್ನೈ: ರಸ್ತೆ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಟೆಕ್ಕಿಯೊಬ್ಬರು ಟ್ರಕ್‍ಗೆ ಸಿಲುಕಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.
ಶೋಭನಾ (22) ಮೃತ ಮಹಿಳೆ. ಮಧುರವಾಯಲ್ ಬಳಿ ಈ ಘಟನೆ ನಡೆದಿದೆ. ಶೋಭಾನಾ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನೀಟ್ ಕೋಚಿಂಗ್ ತರಗತಿಗೆ ತನ್ನ ಸಹೋದರನನ್ನು ಬಿಡಲು ತೆರಳಿದ್ದರು.




