February 2, 2026

ಮಂಗಳೂರು: ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಪೊಲೀಸ್ ಶ್ವಾನ ಮೃತ್ಯು: ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ

0
IMG-20230103-WA0021.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನವೊಂದು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.

7 ವರ್ಷ 10 ತಿಂಗಳು ವಯಸ್ಸಿನ ಜ್ವಾಲಾ ಮೃತಪಟ್ಟ ಶ್ವಾನ. ಡಾಬರ್‌ಮನ್ ಪಿಂಚರ್ ತಳಿಗೆ ಸೇರಿದ ಈಕೆ ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಹಾಯ ಮಾಡುತ್ತಿದ್ದಳು.

ಕಳೆದ ಕೆಲವು ಸಮಯಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲಾ ಜನವರಿ 3ರ ಮಂಗಳವಾರ ಬೆಳಗ್ಗೆ 7 ಗಂಟೆಗೆ (ಇಂದು) ಸಾವನ್ನಪ್ಪಿತು. ಮೃತ ಶ್ವಾನಕ್ಕೆ ಸಕಲ ಗೌರವಾದಿಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜ್ವಾಲಾಳನ್ನು ಸಿಬಂದಿ ಕುಮಾರ ಕತ್ಲೇರ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!