March 19, 2026

ಕಾಸರಗೋಡು: ಎಂ.ಡಿ.ಎಂ.ಎ. ಮಾದಕ ವಸ್ತು ಸಾಗಾಟ: ಬಂಟ್ವಾಳ ಮತ್ತು ವಿಟ್ಲ ನಿವಾಸಿ ಸಹಿತ ಐದು ಮಂದಿ ಆರೋಪಿಗಳ ಬಂಧನ

0
20230102_220736.jpg

ಕಾಸರಗೋಡು: ಸುಮಾರು 54 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು ಸಹಿತ ಐವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಬಶೀರ್(27), ಕನ್ಯಾನ ಮಾಡಕುಂಜದ ಕಲಂದರ್ ಶಾಫಿ(29), ತಲಪಾಡಿಯ ಪ್ರೀತಂ(29) ಕಿರಣ್ ಡಿ ಸೋಜ(30) ಮತ್ತು ಕೋಟೆಕ್ಕಾರಿನ ಅಕ್ಷಯ್(24) ಬಂಧಿತರು. ಎರಡು ಸ್ಕೂಟರ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಕಣ್ವತೀರ್ಥ ತೂಮಿನಾಡಿನಿಂದ ಬಶೀರ್ ಮತ್ತು ಕಲಂದರ್ ಶಾಫಿ ಸಂಚರಿಸುತ್ತಿದ್ದ ಸ್ಕೂಟರನ್ನು ನಿಲ್ಲಿಸಿ ನಡೆಸಿದಾಗ 43 ಗ್ರಾಂ ಮಾದಕ ವಸ್ತುಪತ್ತೆಯಾಗಿದೆ . ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಸ್ಕೂಟರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ 12 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ಪತ್ತೆಯಾಗಿ ದ್ದು , ಮೂವರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!