September 20, 2024

ಕಾರ್ಕಳ: ಮಗುಚಿ ಬಿದ್ದ ಶಾಲಾ ಮಕ್ಕಳ ಪ್ರವಾಸದ ಬಸ್

0

ಕಾರ್ಕಳ: ಧರ್ಮಸ್ಥಳ- ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಲೂರು ಸಮೀಪ ಪಾಜೆಗುಡ್ಡೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಮಗುಚಿ ಬಿದ್ದ ಘಟನೆ ಸೋಮವಾರ ನಡೆದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಸವೇಶ್ವರ ಪ್ರೌಢ ಶಾಲೆಗೆ ಸೇರಿದ ಖಾಸಗಿ ಬಸ್ ನಲ್ಲಿ ಮಕ್ಕಳು ಪ್ರವಾಸಕ್ಕೆಂದು ಕರಾವಳಿಗೆ ತೆರಳುತಿದ್ದರು.

ಘಟನೆಯಲ್ಲಿ ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ.

Leave a Reply

Your email address will not be published. Required fields are marked *

error: Content is protected !!