ಹೊಸ ವರ್ಷಕ್ಕೆ ಕೇಂದ್ರ ಸರಕಾರದಿಂದ ಉಡುಗೊರೆ: ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಗೆ 25 ರೂ. ಹೆಚ್ಚಳ
ಹೊಸದಿಲ್ಲಿ : ಹೊಸ ವರ್ಷದ ಆರಂಭದ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳವಾಗಿದೆ. ತತ್‌ಕ್ಷಣದಿಂದಲೇ ಅನ್ವಯವಾಗುವಂತೆ ರವಿವಾರ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 25 ರೂ. ಏರಿಕೆ ಮಾಡಿವೆ.
ಇದರಿಂದಾಗಿ ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್ ದರ 1,685.50 ರೂ.ಗಳಾದರೆ ದಿಲ್ಲಿಯಲ್ಲಿ 1,769 ರೂ, ಮುಂಬಯಿಯಲ್ಲಿ 1,721 ರೂ. ಹಾಗೂ ಚೆನ್ನೈಯಲ್ಲಿ 1,971 ರೂ. ಆಗಲಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.




