ಸ್ಕೂಟರ್ ಗೆ ಕಾರು ಢಿಕ್ಕಿ: ಯುವತಿ ಮೃತ್ಯು
ನವದೆಹಲಿ: ಯುವತಿಯೊಬ್ಬಳ ಸ್ಕೂಟರ್ ಅಪಘಾತಕ್ಕೀಡಾಗಿದ್ದು, ಆಕೆಯನ್ನು ಕಾರು 12 ಕಿ.ಮೀವರೆಗೂ ಎಳೆದೊಯ್ದಿದ್ದು, ಪರಿಣಾಮ ಯುವತಿ ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಅಮನ್ ವಿಹಾರ್ ನಿವಾಸಿ ಅಂಜಲಿ (20) ಮೃತ ಯುವತಿ. ದೆಹಲಿಯ ಸುಲ್ತಾನ್ಪುರಿಯಲ್ಲಿ ಇಂದು ಬೆಳಗ್ಗೆ ಹೊಸ ವರ್ಷಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಅಂಜಲಿ ಚಲಿಸುತ್ತಿದ್ದ ಸ್ಕೂಟಿಯು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ ಆಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೂ ಕಾರು 10-12 ಕಿ.ಮೀ ದೂರ ಕ್ರಮಿಸಿದೆ.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಅದಾದ ಒಂದು ಗಂಟೆಯ ನಂತರ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮತ್ತೊಂದು ಕರೆ ಬಂದಿದೆ. ಅದಾದ ಬಳಿಕ ಪೊಲೀಸರು ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ್ದು, ವಾಹನಕ್ಕಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.