March 19, 2026

ಹಾವೇರಿಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ: ಕಾಸರಗೋಡಿನ ದಂಪತಿ ಮೃತ್ಯು, ನಾಲ್ವರಿಗೆ ಗಾಯ

0
IMG-20221227-WA0025.jpg

ಕಾಸರಗೋಡು: ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡಿನ ದಂಪತಿ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಕಾಸರಗೋಡು ನಗರ ನುಸ್ರತ್ ನಗರದ ಮುಹಮ್ಮದ್ (65) ಮತ್ತು ಪತ್ನಿ ಆಯಿಷಾ (62) ಮೃತಪಟ್ಟವರು.

ಮುಹಮ್ಮದ್ ಅವರ ಪುತ್ರ ಸಿಯಾದ್, ಸೊಸೆ ಸಜ್ನಾ, ಮಕ್ಕಳಾದ ಮುಹಮ್ಮದ್, ಆಯಿಷಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹವನ್ನು ಹಾನಗಲ್ ತಾಲೂಕು ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ.

ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಕಾರು ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಸಿನ ನಡುವೆ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪರಿಸರವಾಸಿಗಳು ಕಾರಿನಲ್ಲಿ ಸಿಲುಕಿದವರನ್ನು ಹೊರತೆಗೆದು ಆಸ್ಪತ್ರೆ ಗೆ ತಲಪಿಸಿದರೂ ಮುಹಮ್ಮದ್ ಮತ್ತು ಆಯಿಷಾ ರವರ ಜೀವ ಉಳಿಸಲಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!