March 19, 2026

ಬೆಳ್ತಂಗಡಿ: ಗೂಡ್ಸ್ ರಿಕ್ಷಾ, ಶಾಲಾ ಬಸ್ ಮುಖಾಮುಖಿ ಢಿಕ್ಕಿ: ಗೂಡ್ಸ್ ಚಾಲಕ‌ ಮೃತ್ಯು

0
image_editor_output_image248598527-1671871429465.jpg

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಮಲೆಬೆಟ್ಟು ಬಳಿ ಶನಿವಾರ (ಡಿ.24 ರಂದು) ಬೆಳಗ್ಗೆ ಗೂಡ್ಸ್ ರಿಕ್ಷಾ ಹಾಗೂ ಶಾಲಾ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟ ಘಟನೆ ನಡೆದಿದೆ.

ಗೂಡ್ಸ್ ರಿಕ್ಷಾದಲ್ಲಿದ್ದ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್(50) ಸಾವನ್ನಪ್ಪಿದವರು.

ರಿಕ್ಷಾ ಚಾಲಕ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಹನೀಫ್(48), ಪಣಕಜೆ ನಿವಾಸಿ ಕೆ.ಮೊಹಮ್ಮದ್(57) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಕೊಯ್ಯೂರಿನಿಂದ ಶಾಲಾ ಮಕ್ಕಳನ್ನು ಬಸ್ ನಲ್ಲಿ ಉಜಿರೆಗೆ ಕರೆದೊಯ್ಯುತ್ಯಿದ್ದಾಗ ಶಾಲಾ ಬಸ್ ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ರಿಕ್ಷಾಗೆ ಢಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!