February 3, 2026

ಶೂಟಿಂಗ್ ವೇಳೆ ಉರ್ಫಿ ಜಾವೇದ್ ನನ್ನು ವಶಕ್ಕೆ ಪಡೆದ ದುಬೈ ಪೊಲೀಸರು

0
Screenshot_2022-12-21-10-51-27-05_680d03679600f7af0b4c700c6b270fe7.jpg

ದುಬೈ: ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಮಾಡೆಲ್ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಬಂದಿದೆ.

ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ದುಬೈನಲ್ಲಿ ಅವರು ಚಿತ್ರೀಕರಣ ಮಾಡುತ್ತಿದ್ದಾಗ ಯುಎಇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನುವುದು ದೃಢವಾಗಿದೆ. ಪ್ರವಾಸಕ್ಕೆಂದು ತೆರಳಿದ್ದ ಉರ್ಫಿಯು ಸಾರ್ವಜನಿಕವಾಗಿ ಅರೆಬರೆ ಬಟ್ಟೆಯನ್ನು ಹಾಕಿಕೊಂಡಿದ್ದರು ಎಂದಿದ್ದಾರೆ ದುಬೈ ಪೊಲೀಸರು.

ಈ ವಿಚಾರವಾಗಿ ಮಾಧ್ಯಮಗಳು ಉರ್ಫಿಯನ್ನು ಸಂಪರ್ಕಿಸಿದರೂ, ಈ ಕುರಿತು ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ದುಬೈನಲ್ಲಿ ಈ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಚಿತ್ರೀಕರಣ ಮಾಡಲು ಅವಕಾಶವಿಲ್ಲದ ಕಾರಣ ಈ ರೀತಿಯಲ್ಲಿ ಅವರು ಸಂಕಷ್ಟ ಎದುರಿಸಬೇಕಾಗಿದೆ. ಸದ್ಯ ಉರ್ಫಿ ಪೊಲೀಸರ ವಶದಲ್ಲಿ ಇದ್ದು, ಅಲ್ಲಿನ ಕಾನೂನಿಗೆ ತಲೆಬಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Leave a Reply

Your email address will not be published. Required fields are marked *

error: Content is protected !!