February 3, 2026

ಆರ್ಜೆಂಟೀನಾ ಚಾಂಪಿಯನ್‌: ಉಚಿತವಾಗಿ 1,500 ಪ್ಲೇಟ್ ಬಿರಿಯಾನಿ ನೀಡಿದ ಹೋಟೆಲ್ ಮಾಲಕ

0
image_editor_output_image-160173719-1671478542648.jpg

ತ್ರಿಶೂರ್ (ಕೇರಳ): ಆರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ ಗೆದ್ದರೆ 1500 ಪ್ಲೇಟ್ ಬಿರಿಯಾನಿ ಉಚಿತವಾಗಿ ವಿತರಿಸುತ್ತೇನೆ ಎಂದು ಮುಂಚಿತವಾಗಿ ನೀಡಿದ ಭರವಸೆಯನ್ನು ಕೇರಳದ ಹೋಟೆಲ್ ಮಾಲೀಕರು ಮತ್ತು ತಂಡದ ಅಭಿಮಾನಿಗಳು ಈಡೇರಿಸಿದ್ದಾರೆ.

ತ್ರಿಶೂರ್ ಜಿಲ್ಲೆಯ ಪಲ್ಲಿಮೂಲಾ ಪ್ರದೇಶದ ರಾಕ್‌ಲ್ಯಾಂಡ್ ಹೊಟೇಲ್ ಮಾಲಕ ಶಿಬು ಅವರು ಮಹಾ ಕ್ರೀಡಾಕೂಟದ ಆರಂಭಕ್ಕೂ ಮುನ್ನ ಆರ್ಜೆಂಟೀನಾ ಕಪ್ ಗೆದ್ದರೆ 1,000 ಪ್ಲೇಟ್ ಬಿರಿಯಾನಿಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು.ಆದಾಗ್ಯೂ, ಆ ರ್ಜೆಂಟೀನಾ ಫ್ರಾನ್ಸ್ ವಿರುದ್ಧ ಫೈನಲ್‌ನಲ್ಲಿ ಗೆದ್ದ ಮರುದಿನ ಸೋಮವಾರ ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನಸಮೂಹವು ಬಂದಿತು.

ನೀಡಿದ ಭರವಸೆಯಿಂದ ಹಿಂದೆ ಸರಿಯುವವರಲ್ಲ ಎಂಬಂತೆ ಶಿಬು ಅವರು ತಮ್ಮ ಮಾತನ್ನು ಉಳಿಸಿಕೊಂಡಿರುವುದು ಮಾತ್ರವಲ್ಲದೆ ಉಚಿತ ಬಿರಿಯಾನಿಗಳ ಸಂಖ್ಯೆಯನ್ನು 500 ರಷ್ಟು ಹೆಚ್ಚಿಸಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನರ ಉದ್ದನೆಯ ಸರತಿ ಸಾಲಿನಲ್ಲಿ ಪ್ರವೇಶಿಸಲು ಬೆಳಗ್ಗೆಯಿಂದ ಅವರ ಔಟ್‌ಲೆಟ್‌ನ ಹೊರಗೆ ಕಾಯುತ್ತಿದ್ದ ದೃಶ್ಯಗಳು ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ.

Leave a Reply

Your email address will not be published. Required fields are marked *

error: Content is protected !!