March 20, 2026

ಮಂಗಳೂರು: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಚಿನ್ನ ದೋಚಿದ್ದ ಪರಾರಿಯಾಗಿದ್ದ ಆರೋಪಿ ಪೊಲೀಸ್ ವಶಕ್ಕೆ

0
IMG-20221217-WA0030.jpg

ಮಂಗಳೂರು: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೋಝಿಕ್ಕೋಡ್ ನಿವಾಸಿ ಫಿರೋಜ್ ಪದವತ್ (38) ಎಂದು ಗುರುತಿಸಲಾಗಿದೆ.

ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ ಬ್ರಾಸ್ಲೆಟ್ ಮತ್ತು ಚಿನ್ನದ ಸರವನ್ನು ಆರೋಪಿ ಫಿರೋಜ್ ಕದ್ದಿದ್ದು, ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಕಳ್ಳತನವಾದ ಆಭರಣಗಳ ಒಟ್ಟು ತೂಕ 48 ಗ್ರಾಂ ಆಗಿದ್ದು, ಮೌಲ್ಯ 2.37 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಕಣ್ಣೂರು-ಮಂಗಳೂರು ಮೆಮು ರೈಲಿನ ಮೂಲಕ ಮಂಗಳೂರು ಸೆಂಟ್ರಲ್ ರೈಲ್ವೆ ಠಾಣೆಗೆ ಆಗಮಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ಕದ್ದ ಎರಡೂ ಚಿನ್ನಾಭರಣಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!