August 13, 2026

ಮಂಗಳೂರು: ಕಾಲೇಜಿನಲ್ಲಿ ಬುರ್ಖಾ ಧರಿಸಿ ಐಟಂ ಸಾಂಗ್‌ ಗೆ ಅಶ್ಲೀಲ ನೃತ್ಯ: ನಾಲ್ವರು ವಿದ್ಯಾರ್ಥಿಗಳ ಅಮಾನತು

0
IMG-20221208-WA0025.jpg

ಮಂಗಳೂರು : ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಾಲ್ವರು ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಧರಿಸಿ ‘ಐಟಂ ಸಾಂಗ್‌’ಗೆ ‘ಅಸಭ್ಯ ನೃತ್ಯ’ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ಹಿಜಾಬ್ ಅನ್ನು ಅಣಕಿಸುವಂತೆ ಬಾಲಿವುಡ್‌ನ ‘ಐಟಂ ಸಾಂಗ್‌’ಗೆ ‘ಅಸಭ್ಯ ಹೆಜ್ಜೆ’ಗಳನ್ನು ಹಾಕಿದ್ದಾರೆ.

ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತ ಕಾಲೇಜಿನ ಆಡಳಿತ ಮಂಡಳಿ, ನೃತ್ಯ ಮಾಡಿದ ನಾಲ್ವರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದೆ. ನೃತ್ಯ ಮಾಡಿದವರು ಕೂಡ ಮುಸ್ಲೀಂ ಸಮುದಾಯದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ವಿಡಿಯೋ ವೈರಲಾದ ಬಳಿಕ ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ “ಕಾಲೇಜಿನ ವಿಭಾಗವೊಂದರ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯ ಕಾರ್ಯಕ್ರಮವಿತ್ತು.
ಈ ನೃತ್ಯವು ಆ ಕಾರ್ಯಕ್ರಮದ ಭಾಗವಾಗಿರಲಿಲ್ಲ. ವೇದಿಕೆಯ ಮೇಲೆ ಬುರ್ಖಾ ಧರಿಸಿ ಹಾಡಿಗೆ ನೃತ್ಯ ಮಾಡಿದವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳೇ.
ಸಮಾಜದ ಮತ್ತು ಕ್ಯಾಂಪಸ್‌ನ ಸಾಮರಸ್ಯವನ್ನು ಹಾಳುಮಾಡುವ ಯಾವುದೇ ಚಟುವಟಿಕೆಗಳನ್ನು ನಮ್ಮ ಕಾಲೇಜು ಬೆಂಬಲಿಸುವುದಿಲ್ಲ. ಮತ್ತು ಇದನ್ನು ಖಂಡಿಸುತ್ತದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತೇವೆ.

ವಿಡಿಯೋದಲ್ಲಿ ಕಂಡು ಬಂದಿರುವ ನಾಲ್ವರು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!