March 20, 2026

ಮಿನಿವ್ಯಾನ್ ಕಂಟೈನರ್ ಟ್ರಕ್‌ ನಡುವೆ ಅಪಘಾತ: ಆರು ಮಂದಿ ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ

0
image_editor_output_image945549213-1670414364324.jpg

ಚೆನ್ನೈ: ತಮಿಳುನಾಡಿನ ಮದುರಾಂತಕಂ ಬಳಿ ಮಿನಿವ್ಯಾನ್ ವೊಂದು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಇಂದು ಬೆಳಗಿನ ಜಾವ ಚೆಂಗಲ್‌ಪೇಟ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಮತ್ತು ಪ್ರಯಾಣಿಕರು ತಿರುವಣ್ಣಾಮಲೈನಿಂದ ಚೆನ್ನೈಗೆ ಹಿಂತಿರುಗುತ್ತಿದ್ದರು.

ಮೃತಪಟ್ಟವರಲ್ಲಿ ಮೂವರು 28 ರಿಂದ 33 ವರ್ಷ ವಯಸ್ಸಿನವರಾಗಿದ್ದು, ಒಬ್ಬ ವ್ಯಕ್ತಿಗೆ 70 ವರ್ಷ ಮತ್ತು ಇತರ ಇಬ್ಬರಿಗೆ 55 ಹಾಗೂ 65 ವರ್ಷ ವಯಸ್ಸಿನವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಚೆಂಗಲ್‌ಪೇಟೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!