August 14, 2026

ಮಂಗಳೂರು: ಪಂಪ್‌ವೆಲ್‌ನಲ್ಲಿ ನೋಟಿನ ಬಂಡಲ್ ಪತ್ತೆ – ಪೊಲೀಸ್ ಕಮಿಷನರ್ ಮಾಹಿತಿ

0
IMG-20221207-WA0014.jpg

ಮಂಗಳೂರು: ಪಂಪ್‌ವೆಲ್‌ ಬಸ್ ನಿಲ್ದಾಣ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ನ.26 ರಂದು ಶಿವರಾಜ್ ಎಂಬವರಿಗೆ ನೋಟಿನ ಬಂಡಲ್ ಗಳು ಸಿಕ್ಕಿದ್ದರ ಬಗ್ಗೆ ಪೊಲೀಸ್‌ ಆಯುಕ್ತರಾದ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಶಿವರಾಜ್ ಅವರು ನೋಟಿಮ ಬಂಡಲ್‌ ನಲ್ಲಿ ಕೆಲ ನೋಟುಗಳನ್ನು ತುಕಾರಾಮ್ ಎನ್ನುವವರಿಗೆ ನೀಡಿದ್ದು, ತುಕಾರಾಮ್ ಮನೆಯವರು 2.99 ಲ.ರೂ.ಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದರು.

ಇನ್ನು ಶಿವರಾಜ್ ಅವರಲಿದ್ದ ಇದ್ದ 49,000 ರೂ. ಕೂಡ ಪೊಲೀಸರ ಸುಪರ್ದಿಯಲ್ಲಿದೆ. ಬಂಡಲ್ ಗಳಲ್ಲಿ ಒಟ್ಟು ಎಷ್ಡು ಹಣ ಇತ್ತು, ಅದನ್ನು ಯಾರು ತಂದಿಟ್ಟಿದ್ದರು, ಆ ಬಂಡಲ್ ನಿಂದ ಬೇರೆ ಯಾರಾದರೂ ಹಣ ಪಡೆದುಕೊಂಡು ಹೋಗಿದ್ದಾರೆಯೇ ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!