August 13, 2026

ಕಾಸರಗೋಡು: ನಿಗೂಢ ರೀತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ

0
IMG-20221205-WA0033.jpg

ಕಾಸರಗೋಡು: ತೃಕ್ಕರಿಪುರದಲ್ಲಿ ಯುವಕನೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಮಟ್ಟಮ್ಮಲ್ ನ ಎಂ. ಪ್ರಿಯೇಶ್ (31) ಮೃತಪಟ್ಟವರು.

ಭಾನುವಾರ ರಾತ್ರಿ ಮೊಬೈಲ್ ಗೆ ಬಂದ ಕರೆ ಬಳಿಕ ಮನೆಯಿಂದ ಹೊರ ತೆರಳಿದ್ದು ಮರಳಿ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಮನೆಯ ಆಲ್ಪ ದೂರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಫ್ಯಾಂಟ್ ಮಾತ್ರ ಧರಿಸಿದ್ದಾರೆ. ಪ್ರಿಯೇಶ್ ತೆರಳಿದ್ದ ಬೈಕ್ ಮೃತದೇಹದ ಬಳಿಯೇ ಪತ್ತೆಯಾಗಿದೆ.

ಕೊಲೆ ಎಂಬ ಅನುಮಾನ ಉಂಟಾಗಿದ್ದು, ಚಂದೇರ ಪೊಲೀಸರು ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಪ್ರಿಯೇಶ್ ಚಾಲಕರಾಗಿ ದುಡಿಯುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!