August 14, 2026

ಬಂಟ್ವಾಳ: ಮಹಿಳೆಯ ಮೈಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತ್ಯು

0
image_editor_output_image1526828071-1670228527077

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆಯೋರ್ವಳು ಸ್ಥಳದಲ್ಲಿ ಯೇ ಮೃತಪಟ್ಟ ಘಟನೆ ಮೊಡಂಕಾಪು ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉಷಾ ಮೃತಪಟ್ಟ ಮಹಿಳೆ.

ಮೊಡಂಕಾಪು ತೆಂಗಿನ ಎಣ್ಣೆ ಮಿಲ್ ಬಳಿ ಸ್ಕೂಟರ್ ಗಳ ನಡುವೆ ನಡುವೆ ಅಪಘಾತ ನಡೆದು, ರಸ್ತೆಗೆ ಬಿದ್ದ ಮಹಿಳೆ ಮೈ ಮೇಲೆ ಲಾರಿ ಹರಿದು ಸ್ಥಳದಲ್ಲಿ ಯೇ ಮೃತಪಟ್ಟಿದ್ದಾರೆ. ಮಹಿಳೆಗೆ ಬೆಂಜನಪದವು ಎಂಬಲ್ಲಿ ಅಂಗಡಿಹೊಂದಿದ್ದು, ಸಾಮಾಗ್ರಿಗಳನ್ನು ತರಲು ಪೇಟೆಗೆ ಬಂದಿದ್ದು, ವಾಪಾಸು ಹೋಗುವ ವೇಳೆ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲಿಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!