ಬೀಗ ಹಾಕಿದ್ದ ಮನೆ ಕಳವು ಮಾಡುತ್ತಿದ್ದ ದಂಪತಿಯ ಬಂಧನ
ಬೆಂಗಳೂರು: ನಗರದಲ್ಲಿ ಬೀಗ ಹಾಕಿದ್ದ ಮನೆ ದೋಚುತ್ತಿದ್ದ ದಂಪತಿಯನ್ನು ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗರಾಜ್ ಮತ್ತು ರಮ್ಯ ಬಂಧಿತ ದಂಪತಿ. ಇವರಿಬ್ಬರೂ ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದರು. ಬೀಗ ಹಾಕಿದ್ದ ಮನೆಗಳು ಇವರ ಟಾರ್ಗೆಟ್ ಆಗಿತ್ತು. ಮೈಸೂರು ಮೂಲದ ರಮ್ಯ ಮತ್ತು ಬೆಂಗಳೂರಿನ ಉತ್ತರಹಳ್ಳಿ ಮೂಲದ ನಾಗರಾಜ್ ನಡುವೆ ಪರಿಚಯವಾಗಿತ್ತು.
ಬಳಿಕ ಇಬ್ಬರೂ ಕೂಡ ಇನ್‍ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು. ಈ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ನಂತರ ಮದುವೆಯಾಗಿದ್ದರು. ಮದುವೆಯ ಬಳಿಕ ನಾಗರಾಜ್ ಮತ್ತು ರಮ್ಯ ಸೇರಿಕೊಂಡು ಕಳ್ಳತನ ಮಾಡಲು ಶುರು ಮಾಡಿದ್ದರು.




