August 14, 2026

ಉಡುಪಿ: ಟೈಲರ್‌ ಬಳಿಗೆ ಹೋಗುವುದಾಗಿ ತಿಳಿಸಿ ಹೊರಟ ಯುವತಿ ನಾಪತ್ತೆ

0
IMG-20221204-WA0009.jpg

ಉಡುಪಿ: ಟೈಲರ್‌ ಬಳಿ ಬಟ್ಟೆ ಹೊಲಿಯಲು ನೀಡುವುದಾಗಿ ತಿಳಿಸಿ ಮನೆಯಿಂದ ಹೋದ ಯುವತಿ ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಉಡುಪಿಯ ಬಡಗುಬೆಟ್ಟುವಿನ ಇಂದಿರಾ ನಗರದಲ್ಲಿ ನಡೆದಿದೆ. 19 ವರ್ಷದ ನಿಖಿತಾ ನಾಪತ್ತೆಯಾದ ಯುವತಿ.

ಇವರು ನ.28 ರಂದು ಉಡುಪಿಯ ಬಡಗುಬೆಟ್ಟು ಗ್ರಾಮದ ಇಂದಿರಾ ನಗರದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದರು. ಬಳಿಕ ಬೆಳಿಗ್ಗೆ 10:30 ರ ಸುಮಾರಿಗೆ ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಬಾರದೇ ಕಾಣೆಯಾಗಿದ್ದಾರೆ.

ಇವರ ಬಗ್ಗೆ ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!