February 4, 2026

ವಾಹನದೊಳಗೆ ಮಹಿಳೆಯ ಅತ್ಯಾಚಾರ: ಖಾಸಗಿ ಶಾಲಾ ಬಸ್ ಚಾಲಕನ‌ ಬಂಧನ

0
image_editor_output_image-1823389882-1670047005378.jpg
ಬೆಂಗಳೂರು: ಪಶ್ಚಿಮ ಬೆಂಗಳೂರಿನ ನಾಯಂಡಹಳ್ಳಿ ಬಳಿ ಖಾಸಗಿ ಶಾಲಾ ಬಸ್ಸಿನ ಚಾಲಕ ತನ್ನ ವಾಹನದೊಳಗೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳವಾರ ನಡೆದಿದೆ.

ಆರೋಪಿ, ನಾಯಂಡಹಳ್ಳಿ ನಿವಾಸಿ ಶಿವಕುಮಾರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಭಾವಿಯಲ್ಲಿ ವಾಸವಾಗಿರುವ ಅತ್ಯಾಚಾರ ಸಂತ್ರಸ್ತೆ, ಖಾಸಗಿ ಶಾಲೆಯೊಂದರಲ್ಲಿ ಆಯಾ (ಪ್ಯೂನ್) ಆಗಿ ಕೆಲಸ ಮಾಡುತ್ತಿದ್ದಾರೆ.

ಕೆಲಸ ಮುಗಿಸಿ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್‌ಗಾಗಿ ಮಹಿಳೆ ಕಾಯುತ್ತಿದ್ದಾಗ ಶಿವಕುಮಾರ್ ಬಸ್‌ ಚಲಾಯಿಸಿಕೊಂಡು ಆ ಮಹಿಳೆ ಇರುವತ್ತ ಬಂದಿದ್ದನು.

ಮಹಿಳೆ ಡ್ರಾಪ್ ಗಾಗಿ ಬಸ್ಸಿನತ್ತ ಕೈಬೀಸಿದ್ದರು. ಶಿವಕುಮಾರ್ ಬಸ್ ನಿಲ್ಲಿಸಿ, “ನಾನೂ ನಾಗರಭಾವಿ ಕಡೆಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮಹಿಳೆಯನ್ನು ಬಸ್‌ನಲ್ಲಿ ಕೂರಿಸಿಕೊಂಡಿದ್ದನು.

Leave a Reply

Your email address will not be published. Required fields are marked *

You may have missed

error: Content is protected !!