February 3, 2026

ತಮಿಳುನಾಡಿನ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ

0
image_editor_output_image-1404984209-1670039516280.jpg

ಚೆನ್ನೈ: ತಮಿಳುನಾಡಿನ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ದೇವಸ್ಥಾನಗಳಲ್ಲಿ ಪೂಜಾ ಶುದ್ದತೆ ಮತ್ತು ಪಾವಿತ್ರ್ಯ ಕಾಪಾಡುವುದು ಅತ್ಯಗತ್ಯ. ಹೀಗಾಗಿ ದೇವಳಗಳಲ್ಲಿ ಮೊಬೈಲ್ ಫೋನ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ಇನ್ನು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗಬಾರದು. ಮೊಬೈಲ್ ಇರಿಸುವುದಕ್ಕಾಗಿಯೇ ವಿಶಷ ಫೋನ್ ಠೇವಣಿ ಲಾಕರ್‌ನ್ನು ಸ್ಥಾಪಿಸಿ ಮೊಬೈಲ್‌ನ್ನು ಇರಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಅಲ್ಲದೆ ಇದಕ್ಕಾಗಿ ಭದ್ರತಾ ಸಿಬಂದಿಯನ್ನು ದೇವಳಗಳು ನೇಮಕ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!