May 11, 2026

ಮೊದಲ ಬಾರಿಗೆ ಸರ್ಕಾರಿ ವೈದ್ಯರಾಗಿ ಮಂಗಳಮುಖಿಯರಿಬ್ಬರ ನೇಮಕ

0
IMG-20221201-WA0027.jpg

ಹೈದರಾಬಾದ್: ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಇಬ್ಬರು ಮಂಗಳಮುಖಿಯರನ್ನು ಸರ್ಕಾರಿ ವೈದ್ಯರಾಗಿ ನೇಮಿಸಲಾಗಿದೆ.

ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾತೋಡ್ ಹಾಗೂ ರುತ್ ಜಾನ್ ಪೌಲ್ ಅವರೇ ವೈದ್ಯರಾಗಿ ನೇಮಕಗೊಂಡವರು. ಇವರಿಬ್ಬರೂ 2015ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಕೆಲ ವರ್ಷ ಕಾಲ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರ ಸೇವೆ ಪಡೆದುಕೊಳ್ಳಲು ರೋಗಿಗಳು ಮುಂದೆ ಬರುತ್ತಿರಲಿಲ್ಲ. ಅಲ್ಲದೆ ಲಿಂಗ ವಿಚಾರವಾಗಿ ಪ್ರಾಚಿ ರಾತೋಡ್ ಅವರನ್ನು ಖಾಸಗಿ ಆಸ್ಪತ್ರೆಯೊಂದರ ಸೇವೆಯಿಂದ ವಜಾಗೊಳಿಸಲಾಗಿತ್ತು.

ಇನ್ನು ಛಲ ಬಿಡದ ಇಬ್ಬರೂ ಸರ್ಕಾರಿ ಸೇವೆಗಾಗಿ ಪರಿಶ್ರಮ ಹಾಕಿದ್ದು, ಇದೀಗ ಇಬ್ಬರಿಗೂ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ತೆಲಂಗಾಣ ಸರ್ಕಾರ ಒದಗಿಸಿದೆ.

ಇವರಿಬ್ಬರನ್ನು ತೆಲಂಗಾಣದ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಸೇವೆಗೆ ನಿಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!