August 14, 2026

ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸ್ನೇಹಿತೆಯನ್ನು ಕೊಲೆಗೈದ ಪ್ರಿಯಕರ

0
image_editor_output_image861698087-1669868280021.jpg

ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸ್ನೇಹಿತೆಯನ್ನು ಪ್ರಿಯಕರ ಗೋಡೆಗೆ ತಲೆ ಹೊಡೆದು ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೇಪಾಳ ಮೂಲದ ಕೃಷ್ಣಕುಮಾರಿ ಕೊಲೆಯಾದಾಕೆ. ನೇಪಾಳದ ಸಂತೋಷ್ ದಾಮಿ ಕೊಲೆ ಆರೋಪಿ. ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ಇಬ್ಬರು ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಸಂತೋಷ್ ದಾಮಿ ಕೃಷ್ಣಕುಮಾರಿಯ ತಲೆಯನ್ನು ಗೋಡೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಹೊರಮಾವು ಯೂನಿಸೆಕ್ಸ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಕುಮಾರಿಗೆ ಅಲ್ಲಿಯೇ ಸಂತೋಷ್ ದಾಮಿಯ ಪರಿಚಯವಾಗಿತ್ತು. ಬಳಿಕ ಇಬ್ಬರು ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!