February 3, 2026

ಹೈದರಾಬಾದ್‌‌ನ ಕಾಲೇಜ್‌ ಲ್ಯಾಬ್‌‌ನಲ್ಲಿ ರಾಸಾಯನಿಕ ಅನಿಕ ಸೋರಿಕೆ – 25ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

0
IMG-20221118-WA0030.jpg

ಹೈದರಾಬಾದ್: ಕಾಲೇಜೊಂದರ ಲ್ಯಾಬ್‌‌ನಲ್ಲಿ ರಾಸಾಯನಿಕ ಅನಿಲ ಸೋರಿಕೆಯಾದ ಪರಿಣಾಮ, 25ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಹೈದರಾಬಾದ್‌‌ನ ಕಸ್ತೂರಬಾ ಸರ್ಕಾರಿ ಕಾಲೇಜಿನ ಪ್ರಯೋಗಾಲಯದಲ್ಲಿ ರಾಸಾಯನಿಕ ಅನಿಲ ಸೋರಿಕೆಯಾದ ನಂತರ 25 ವಿದ್ಯಾರ್ಥಿಗಳು ತಲೆಸುತ್ತು ಮತ್ತು ಅಸ್ವಸ್ಥರಾಗಿದ್ದು, ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಕಾಲೇಜಿನ ಲ್ಯಾಬ್‌ನಲ್ಲಿ ಯಾವ ಅನಿಲ ಸೋರಿಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!