ಆಳವಾದ ಕಂದಕಕ್ಕೆ ಉರುಳಿ ಬಿದ್ದ ಮಿನಿಬಸ್: 11 ಮಕ್ಕಳು ಸೇರಿದಂತೆ 20 ಜನರು ಸಾವು
ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಆಳವಾದ ಕಂದಕಕ್ಕೆ ಮಿನಿಬಸ್ ಬಿದ್ದು, 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪ್ರವಾಹದಿಂದ ಕೊಚ್ಚಿಹೋದ ರಸ್ತೆಯಲ್ಲಿ ನೀರು ತುಂಬಿದ ಹಳ್ಳಕ್ಕೆ ಬಸ್ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ ಮಕ್ಕಳು 2ರಿಂದ 8 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಾದಿಮ್ ಹುಸೇನ್ ತಿಳಿಸಿದ್ದಾರೆ.




