May 16, 2026

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಪುರೋಹಿತ: ಆರೋಪಿ ತಂದೆ ಪೊಲೀಸ್ ವಶಕ್ಕೆ

0
IMG-20221118-WA0016.jpg

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ತಂದೆ ಜೈಲು ಪಾಲಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.

ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ.

ವೆಂಕಟೇಶ ಕಾರಂತ ಅವರು ತುಂಬೆ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಬಾಲಕಿಗೆ ವೆಂಕಟೇಶ ಕಾರಂತ ಅವರು ಮಲತಂದೆ ಸಂಬಂಧಿ ಎಂದು ತಿಳಿದುಬಂದಿದೆ.

ಬಾಲಕಿಯ ತಂದೆ ಅಪಘಾತದಲ್ಲಿ ಮರಣಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿ ಇವರ ಜೊತೆಯಲ್ಲಿ ವಾಸವಾಗಿದ್ದಳು.

ಇನ್ನು ಸಂತ್ರಸ್ತ ಅಪ್ರಾಪ್ತ ಬಾಲಕಿಯನ್ನು 4 ತಿಂಗಳ ಗರ್ಭವತಿ ಮಾಡಿದ ಆರೋಪದ ಮೇಲೆ ಬಾಲಕಿಯ ತಂದೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!