February 4, 2026

ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಯರನ್ನು ಅರೆನಗ್ನಗೊಳಿಸಿ ವೀಡಿಯೋ ಚಿತ್ರೀಕರಣ: ಮತ್ತಿಕೆರೆಯ ವೈದ್ಯ ವೆಂಕಟರಮಣ್‌ ಬಂಧನ

0
image_editor_output_image-1980094909-1668674365162.jpg

ಬೆಂಗಳೂರು: ಆಕ್ಯೂಪಂಕ್ಚರ್‌ ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಬಟ್ಟೆ ಬಿಚ್ಚಿಸಿ ಅಂಗಾಂಗ ಮುಟ್ಟುವುದಲ್ಲದೆ, ಅರೆನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ನಕಲಿ ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮತ್ತಿಕೆರೆಯ ವೆಂಕಟರಮಣ್‌ (57) ಬಂಧಿತ ಆರೋಪಿ.

ಈತ ಮತ್ತಿಕೆರೆಯ ತನ್ನ ಮನೆಯ ಬಳಿ ಆಕ್ಯೂಪಂಕ್ಚರ್‌ ಕ್ಲಿನಿಕ್‌ ತೆರೆದು ತನ್ನ ಕ್ಲಿನಿಕ್‌ಗೆ ಬರುವ ಯುವತಿಯರು ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಬಟ್ಟೆಗಳನ್ನು ಬಿಚ್ಚಿಸಿ, ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ.

ಅಲ್ಲದೆ, ಅದನ್ನು ರೋಗಿಗಳಿಗೆ ತಿಳಿಯದಂತೆ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಯುವತಿಯೊಬ್ಬಳು ಚಿಕಿತ್ಸೆಗೆ ಹೋದಾಗ, ತನ್ನ ವಿಕೃತಿ ಮೆರೆದಿದ್ದ. ಅದನ್ನು ಗಮನಿಸಿದ ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಬಳಿಕ ಈತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!