February 4, 2026

FIFA ವಿಶ್ವಕಪ್- ಕತಾರ್ | ಓಝಿಲ್ ಫುಟ್ಬಾಲ್ ಕ್ಲಬ್ ಬಂಟ್ವಾಳ ವತಿಯಿಂದ 40 ಅಡಿ ಎತ್ತರದ ಫ್ಲೆಕ್ಸ್ ಅಳವಡಿಕೆ

0
IMG-20221116-WA0008.jpg

ಬಂಟ್ವಾಳ: ಕತಾರ್ – ಫೀಫಾ ವರ್ಲ್ಡ್ ಕಪ್ ಫುಟ್‌ಬಾಲ್ ಪಂದ್ಯಾಟದಲ್ಲಿ ಆಡಲಿರುವ ಪೋರ್ಚುಗಲ್ ತಂಡದ ಪರವಾಗಿ ಬಂಟ್ವಾಳದಲ್ಲಿ 40 ಅಡಿ ಎತ್ತರದ ಬ್ಯಾನರೊಂದನ್ನು ಹಾಕಲಾಗಿದೆ.

ಓಝಿಲ್ ಫುಟ್ಬಾಲ್ ಕ್ಲಬ್ – ಬಂಟ್ವಾಳ ವತಿಯಿಂದ ನಗರದ ಕೆಳಗಿನ ಪೇಟೆ ಎಂಬಲ್ಲಿ ಪೋರ್ಚುಗಲ್ ಪರವಾಗಿ ಫ್ಲೆಕ್ಸ್ ಹಾಕಲಾಗಿದೆ.

ಅಂತರಾಷ್ಟ್ರೀಯ ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಮೆಸತ್ ಓಝಿಲ್ ಅವರ ಭಾವಚಿತ್ರವಿರುವ ಫ್ಲೆಕ್ಸ್ ಹಾಕುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ದೊಡ್ಡ ಫ್ಲೆಕ್ಸ್ ಅಳವಡಿಸಿದ್ದು ಮಾತ್ರವಲ್ಲದೆ ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಪೋರ್ಚುಗಲ್ ತಂಡವನ್ನು ಪುರಸ್ಕರಿಸಿದ್ದಾರೆ.

ಬಂಟ್ಬಾಳ ಪುರಸಭಾ ಸದಸ್ಯರಾದ ಮೂನಿಷ್ ಆಲಿ, ಓಝಿಲ್ ಫುಟ್ಬಾಲ್ ಕ್ಲಬ್ – ಬಂಟ್ವಾಳ ಸದಸ್ಯರುಗಳಾದ ಶಿಹಾಬ್ ಬಸ್ತಿಪಡ್ಪು, ಫಾರುಕ್ ಜಿ‌ಎಚ್, ನಿಜಾಂ, ಶಮೀರ್, ನಾಸಿರ್, ಇಮ್ರಾನ್ ಅಜ್ಜು, ಸಿನಾನ್, ಮುನ್ನಾ, ಜಲಾಲ್, ಝಿಯಾದ್, ಫಾಝಿಲ್, ಶಾದಿನ್, ಶರ್ದಿನ್, ನಶ್ವಾನ್, ಹಮೀಮ್, ಹಾಗೂ ಇತರ ಅಸ್ವೀರ್, ಇಮ್ರಾನ್ ಹಾಗೂ ಕ್ಲಬ್ಬಿನ ಆಟಗಾರರು ಮತ್ತು ಸದಸ್ಯರು‌ ಪೋರ್ಚುಗಲ್ ಫುಟ್ಬಾಲ್ ತಂಡಕ್ಕೆ ಶುಭವನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!