March 20, 2026

ಹಣ ವರ್ಗಾವಣೆ ಪ್ರಕರಣ – ನಟಿ ಜಾಕ್ವಲೀನ್ ಫರ್ನಾಂಡೀಸ್‌‌ಗೆ ಜಾಮೀನು

0
IMG-20221115-WA0027.jpg

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಾಲಿವುಡ್ ನಟಿ ಜಾಕ್ವಲೀನ್ ಫರ್ನಾಂಡೀಸ್ ಅವರಿಗೆ ದೆಹಲಿ ಕೋರ್ಟ್ 200 ಕೋಟಿ ರೂಪಾಯಿ ಮೊತ್ತದ ಜಾಮೀನು ಮಂಜೂರು ಮಾಡಿದೆ.

2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ ನಟಿಗೆ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್ ಸಹ ಭಾಗಿಯಾಗಿದ್ದು, ನ.11 ರಂದು ಜಾರಿ ನಿರ್ದೇಶನಾಲಯ ಕೋರ್ಟ್ ನಲ್ಲಿ ವಾದ ಮಂಡಿಸಿ ಜಾಕ್ವಲೀನ್ ಫರ್ನಾಂಡೀಸ್ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಯಾಗಿ ಎಲ್‌ಒಸಿಯನ್ನು ನೀಡಿದ ಹೊರತಾಗಿಯೂ ತನಿಖೆ ವೇಳೆ ಜಾರಿ ನಿರ್ದೇಶನಾಲಯ ಏಕೆ ಜಾಕ್ವಲೀನ್ ಫರ್ನಾಂಡೀಸ್ ಅವರನ್ನು ಬಂಧಿಸಿಲ್ಲ ಎಂದು ಕೋರ್ಟ್ ಪ್ರಶ್ನಿಸಿತ್ತು.

Leave a Reply

Your email address will not be published. Required fields are marked *

error: Content is protected !!