ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಭಾರೀ ಮೌಲ್ಯದ ಮದ್ಯ ಸಾಗಾಟ: ಓರ್ವ ಅಬಕಾರಿ ಅಧಿಕಾರಿಗಳ ವಶಕ್ಕೆ
ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಮದ್ಯವನ್ನು ಕಾಸರಗೋಡು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಮಂಜೇಶ್ವರ ಕುಳೂರಿನ ನವೀನ್ ಶೆಟ್ಟಿ ( 35) ಎಂದು ಗುರುತಿಸಲಾಗಿದೆ.
ಕರ್ನಾಟಕದಿಂದ ಕಾಸರಗೋಡಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಅಬಕಾರಿ ದಳದ ಸಿಬ್ಬಂದಿಗಳು ವರ್ಕಾಡಿ ಅಳಂಬಿ ಎಂಬಲ್ಲಿಂದ ಮದ್ಯ ವನ್ನು ವಶಪಡಿಸಿ ಕೊಂಡಿದ್ದಾರೆ.





