August 13, 2026

ಸಾಲ ಮರುಪಾವತಿಸಿದ ಯುವಕ: ಯುವಕನನ್ನು ಸ್ಕೂಟರ್‌ಗೆ ಕಟ್ಟಿ ಓಡಿಸಿದ ಕಿಡಿಗೇಡಿಗಳು

0
image_editor_output_image665766307-1666075951718.jpg

ಕಟಕ್‌: ಸಾಲ ಮರುಪಾವತಿ ಮಾಡದ್ದಕ್ಕೆ ಕಿಡಿಗೇಡಿಗಳ ಗುಂಪೊಂದು ಯುವಕನೊಬ್ಬನನ್ನು ಹಗ್ಗದಿಂದ ಸ್ಕೂಟರ್‌ಗೆ ಕಟ್ಟಿ ಗಾಡಿ ಹಿಂದೆ ಓಡಿಸಿದ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹುಸೇನ್ (24) ಮತ್ತು ಚೋಟು (18) ಬಂಧಿತರು. ಯುವಕ ಆರೋಪಿಗಳ ಕೈಯಿಂದ ಪಡೆದ ಸಲವನ್ನು ಮರು ಪಾವತಿಸಲು ವಿಫಲನಾಗಿದ್ದ

ಇದಕ್ಕಾಗಿ ಆರೋಪಿಗಳ ಆತನನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯಲ್ಲಿ ಓಡುವಂತೆ ಹೇಳಿದ್ದಾರೆ. ಮುಂದೆ ಆರೋಪಿಗಳು ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದರೆ, ಸ್ಕೂಟರ್‌ಗೆ ಕಟ್ಟಿದ ಯುವಕ ಅವರ ಹಿಂದೆಯೇ ಓಡುತ್ತಿದ್ದ.

ಭಾನುವಾರ ಸಂಜೆ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಇನ್ನು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!