March 23, 2026

ರೈಲ್ವೆ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಗೂಡ್ಸ್ ರೈಲು ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

0
image_editor_output_image-274419079-1666018487585.jpg

ರಾಂಚಿ: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ರೈಲ್ವೆ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರು ಯುವಕರು ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದು, ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಸಿರ್ ಅನ್ಸಾರಿ, ಫಿರ್ದೌಸ್ ಅನ್ಸಾರಿ ಮತ್ತು ರಿಜ್ವಾನ್ ಅನ್ಸಾರಿ ಎಂಬ ಮೂವರು ಯುವಕರು ಭಾನುವಾರ ಸಂಜೆ ಗಾಲಾ ನದಿಯ ರೈಲ್ವೆ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗೂಡ್ಸ್ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.

ನಾಸಿರ್ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಇಬ್ಬರನ್ನು ಅವರ ಕುಟುಂಬಸ್ಥರು ಲತೇಹರ್ ನ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಯುವಕರು ಮೂವರು ಸ್ನೇಹಿತರಾಗಿದ್ದರು.

Leave a Reply

Your email address will not be published. Required fields are marked *

error: Content is protected !!