March 23, 2026

ಬಂಟ್ವಾಳ: ಮನೆಗೆ ಸಿಡಿಲು ಬಡಿದು ವೃದ್ಧೆಗೆ ಗಾಯ- ಆಸ್ಪತ್ರೆಗೆ ದಾಖಲು

0
image_editor_output_image1776527909-1665905246220

ಬಂಟ್ವಾಳ : ಮನೆಗೆ ಸಿಡಿಲು ಬಡಿದು, ಮನೆಯಲ್ಲಿ ಮಲಗಿದ್ದ ವೃದ್ದೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಮನೆ ಸಂಪೂರ್ಣ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ವಾಮದಪದವಿನ ಪಾಲೆದಮರ ಎಂಬಲ್ಲಿ ನಡೆದಿದೆ.

ವಾಮದಪದವಿನ ಪಾಲೆದಮರ ಎಂಬಲ್ಲಿ ಕ್ಯಾನ್ಸರ್ ಪೀಡಿತ ಸತೀಶ್ ಶೇರಿಗಾರ್ ಎಂಬವರ ಮನೆಗೆ ಸಿಡಿಲು ಅಪ್ಪಳಿಸಿದ್ದು, ಮನೆಯ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ.

ಮಾತ್ರವಲ್ಲದೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಸಂಪೂರ್ಣ ಮನೆಗೆ ಹಾನಿಯಾಗಿದೆ. ಇನ್ನು ಸಿಡಿಲಿನ ಅಬ್ಬರಕ್ಕೆ ಮನೆಯಲ್ಲಿದ್ದ ಐವರಲ್ಲಿ ಸತೀಶ್ ಅವರ ತಾಯಿ ವೃದ್ದೆ ಬೇಬಿ ಅವರಿಗೆ ಗಾಯವಾಗಿದ್ದು, ಬಂಟ್ಚಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಮಲಗಿದ್ದ ಸತೀಶ್ ಅಕ್ಕ ಶೋಭಾ,ತಮ್ಮ ಕಿಶೋರ್ ,ಇವರ ಪತ್ನಿ ಜಲಜಾಕ್ಷಿ, ಸತೀಶ್ ಅವರ ಮಗು ಋಷಿಕಾ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!